Thursday 23 January 2014

ವಿನೂತನ ಮಾದರಿಯ ಜಾಹೀರಾತು ತಂತ್ರ

                     

                        

              ಇಂದಿನ ತಾಂತ್ರಿಕ ಜಗತ್ತಿನಲ್ಲಿ ಜಾಹೀರಾತುಗಳದ್ದೇ ಕಾರುಬಾರು. ಪ್ರತಿ ದಿನವೂ ನಾವೂ ಅನೇಕ ಜಾಹೀರಾತುಗಳನ್ನು ವ್ರತ್ತಪತ್ರಿಕೆಗಳ್ಳಲ್ಲಿ, ದೂರದರ್ಶನದಲ್ಲಿ, ಅಂತರ್ಜಾಲದಲ್ಲಿ, ಕಾಣಬಹುದು. ಇದರಿಂದ ಉದ್ಯಮಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲು ಸಹ ಕಾರಣೀಭೂತವಾಗಿದೆ. ಈ ಜಾಹೀರಾತುಗಳು ಇಷ್ಟೊಂದು ಪರಿಣಾಮಕಾರಿಯಾಗಿ ಬೆಳೆಯಲು ಉದ್ಯಮಗಳು ಸಾಕಷ್ಟು ಹಣವನ್ನು ವ್ಯಯಿಸುತ್ತಿವೆ. ಜನರ ಗಮನ ಸೆಳೆಯಲು ಉದ್ಯಮಗಳು ಪ್ರಖ್ಯಾತಿ ಹೊಂದಿದ ವ್ಯಕ್ತಿಗಳನ್ನು ರಾಯಭಾರಿಯನ್ನಾಗಿ ಬಳಸಿಕೊಳ್ಳುತ್ತಿದೆ. ಇದಕ್ಕೆ ತಕ್ಕ ವರಮಾನ ಅವರಿಗೆ ನೀಡಲೇ ಬೇಕಾಗುತ್ತದೆ. 
                     ಇಂದಿನ ಬದಲಾವಣೆ ಯುಗದಲ್ಲಿ ಪುರಾತನ ಜಾಹೀರಾತುಗಳು ಮಾಯವಾಗಿ ವಿನೂತನ ತಂತ್ರದ ಜಾಹೀರಾತುಗಳು ಬರುವ ಪ್ರಯತ್ನದಲ್ಲಿ ಬಹುಮುಖಿಯಾಗಿ ಕಾರ್ಯನಿರ್ವಹಿಸುವ ದೊಡ್ಡ ದೊಡ್ಡ ಉದ್ಯಮಗಳು ಡಿಜಿಟಲ್ ತಂತ್ರಾಂಶಗಳನ್ನು ಬಳಸುತ್ತಿದೆ. ಆದರೆ ಪ್ರತಿಯಾಗಿ ಮತ್ತು ಪೂರಕವಾಗಿ ಇಂದಿನ ಕಾಲಕ್ಕೆ ತಕ್ಕಂತೆ ಕಾಲೇಜು ತಾಣಗಳಲ್ಲಿ ಮತ್ತು ಕಾಲೇಜಿನ ಖಾಲಿ ಗೋಡೆಗಳು,ತರಗತಿ,ವಾಹನನಿಲ್ದಾಣ,ಉಪಹಾರಮಂದಿರ,ದಾರಿದೀಪ, ಕಸದಡಬ್ಬಿ, ಮುಂತಾದ ಕಡೆಗಳಲ್ಲಿ ಸಮರ್ಪಕವಾಗಿ ಕಾಣುವಂತೆ ವಿನೂತನ ಮಾದರಿಯಲ್ಲಿಯೂ ಸಹ ಪ್ರದರ್ಶಿಸಬಹುದು. ಈ ಜಾಹೀರಾತುಗಳು ಸ್ಥಳೀಯ ವಿದ್ಯಾರ್ಥಿಗಳಲ್ಲದೇ, ಅಂದರೆ ವಿದೇಶಿ ವಿದ್ಯಾರ್ಥಿಗಳಿಗೂ ಸಹ ಒಂದು ರೀತಿಯ ತಿಳುವಳಿಕೆಯಾಗಿರುತ್ತದೆ. ಅವರು ಈ ಜಾಹೀರಾತುಗಳನ್ನು ಕಾಲೇಜಿನಲ್ಲಿಯೇ ವೀಕ್ಷಿಸಿದಲ್ಲಿ ಅವರಿಗೂ ಸಹ ಅದರ ಸಂಪರ್ಕ ಉಂಟಾಗುತ್ತದೆ. ಅಲ್ಲದೇ,ಅವರ ಇಚ್ಚಾನುಸಾರ ಕೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 
                        ಜಾಹೀರಾತಿನ ಈ ಹೊಸ ತಂತ್ರವನ್ನು ತರುವಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜುಗಳು ಎಷ್ಟು ಸಫಲವಾಗುತ್ತವೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ

No comments:

Post a Comment